ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ 2023 ರೇಡಿಯೋ ಕಾರ್ಯಕ್ರಮದ ಆಧಾರವಾಗಿ ಸಿದ್ಧಪಡಿಸಲಾದ ಸಾರಾಂಶ
(ರಸಾಯನಶಾಸ್ತ್ರ 25
& ಭೌತಶಾಸ್ತ್ರ28)
===========================================
ವಿಜ್ಞಾನ ಪ್ರಶ್ನೆ ಪತ್ರಿಕೆ ಮೂರು ಭಾಗಗಳನ್ನು ಹೊಂದಿದೆ.
ಭೌತಶಾಸ್ತ್ರ28 ರಸಾಯನಶಾಸ್ತ್ರ
25 ಜೀವಶಾಸ್ತ್ರ27
-----------------------------------------------------------------------------------
ಚಿತ್ರಗಳು
·
ನಿಮ್ಮ ಸಿದ್ಧತೆಯನ್ನು ಚಿತ್ರಗಳ ಮೂಲಕ ಪ್ರಾರಂಭಿಸಿ ಒಟ್ಟು 27 ರಿಂದ 30 ಚಿತ್ರಗಳು ಅಭ್ಯಾಸ ಮಾಡಿ.
·
ಭೌತಶಾಸ್ತ್ರ ಮತ್ತು ರಾಸಾಯನಶಾಸ್ತ್ರದಲ್ಲಿ 12 ಅಂಕಗಳನ್ನು ಚಿತ್ರಗಳಿಂದ ಪಡೆಯಬಹುದು ಅತಿ ಮುಖ್ಯವಾಗಿ ಬೆಳಕು ಪ್ರತಿಫಲನ ವಕ್ರೀಭವನ ಅಧ್ಯಾಯದ
ಚಿತ್ರಗಳು 3 ಅಂಕಗಳಿಗೆ
ಬರುವ ಸಾಧ್ಯತೆ ಇದೆ.
ಭೌತಶಾಸ್ತ್ರ 28 ( 5 UNITS )
1. ವಿದ್ಯುತ್ ಶಕ್ತಿ
* ಓಮನ ನಿಯಮ
* ರೋಧವು ಅವಲಂಬಿಸಿರುವ ಅಂಶಗಳು
* ಸರಳ ವಿದ್ಯುತ್ ಮಂಡಲ
* ವಿದ್ಯುತ್ ಫ್ಯೂಸ್
* ಭೂ ಸಂಪರ್ಕ ತಂತಿ
* ವಿಭವಾಂತರ
ಇವುಗಳ ಏಕಮಾನಗಳನ್ನು ತಿಳಿಯಿರಿ.
ಅಭ್ಯಾಸದ ಪ್ರಶ್ನೆಗಳಲ್ಲಿರುವ ಲೆಕ್ಕಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಅವುಗಳನ್ನು ಅಧ್ಯಯನ ಮಾಡಿ.
2. ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
> ಇದರಲ್ಲಿ ಯಾವುದೇ ಲೆಕ್ಕಗಳು ಬರುವುದಿಲ್ಲ. ಆದ್ದರಿಂದ ಮೋಟಾರ್ ಮತ್ತು ವಿದ್ಯುತ್ ಜನಕ
ಚಿತ್ರಗಳನ್ನು ಅಭ್ಯಾಸ ಮಾಡಿ, ಮತ್ತು ಇವುಗಳ ಭಾಗಗಳಾದ ಕಾರ್ಬನ್ ಕುಂಚೆಗಳು
ಮತ್ತು ಒಡಕು ಉಂಗುರಗಳ ಕಾರ್ಯಗಳನ್ನು ತಿಳಿಯಿರಿ.
> AC ಮತ್ತು DC ವಿದ್ಯುತ್ ಪ್ರವಾಹಗಳ ವ್ಯತ್ಯಾಸ ತಿಳಿಯಿರಿ.
> ಕಾಂತೀಯ ಬಲ ರೇಖೆಗಳ ಗುಣಗಳು.
> ನೇರವಾದ ವಾಹಕದಲ್ಲಿ ವಿದ್ಯುತ್ ಪ್ರವಾಹದಿಂದ ಉಂಟಾದ ಕಾಂತಕ್ಷೇತ್ರ
.
> ವೃತ್ತಾಕಾರದ ವಾಹಕದಲ್ಲಿ ವಿದ್ಯುತ್ ಪ್ರವಾಹದಿಂದ ಉಂಟಾದ ಕಾಂತಕ್ಷೇತ್ರ .
> ಸೊಲೆನಾಯ್ಡ್ ನಲ್ಲಿ
ಉಂಟಾದ ಕಾಂತಕ್ಷೇತ್ರ.
* ಮೈಕಲ್ ಫ್ಯಾರಡೆ ಅವರ ಪ್ರಯೋಗದ ವಿವರಣೆ.
3. ಬೆಳಕು ಪ್ರತಿಫಲನ ಮತ್ತು ವಕ್ರೀಭವನ
* ವಿವಿಧ ರೇಖಾಚಿತ್ರಗಳು.
* ನಿಮ್ನ ಮತ್ತು ಪೀನ ಮಸೂರಗಳ ಉಪಯೋಗಗಳು (ಹೆಚ್ಚು
ಅನ್ವಯ ಪ್ರಶ್ನೆಗಳನ್ನು ಕೇಳಬಹುದು.)
* ಮಸೂರದ ಸೂತ್ರದ ಮೇಲೆ ಲೆಕ್ಕಗಳನ್ನು ಕೇಳಬಹುದು.
1/U+1/V=1/f
* ಪಾಠದಲ್ಲಿನ ಉದಾಹರಣೆ ಲೆಕ್ಕಗಳು ಮತ್ತು ಅಭ್ಯಾಸದಲ್ಲಿನ ಲೆಕ್ಕಗಳನ್ನು
ಅಭ್ಯಾಸ ಮಾಡಿ.
* ಬೇರೆ ಬೇರೆ ಪದಗಳು ಉದಾಹರಣೆಗೆ ಪ್ರಧಾನಾಕ್ಷ ಮತ್ತು ವಕ್ರತಾ ಕೇಂದ್ರ
ಇವುಗಳ ವ್ಯಾಖ್ಯೆ ತಿಳಿಯಿರಿ.
* Snell ನ ನಿಯಮ
, ವಕ್ರೀಭವನ ಸೂಚ್ಯಂಕ, ವರ್ಧನೆ.
4. ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
* ಕಣ್ಣಿನ ದೋಷಗಳ ಕುರಿತಾದ ಪ್ರಶ್ನೆಗಳು (ಅನ್ವಯ):
ಸಮೀಪ ದೃಷ್ಟಿ, ದೂರ ದೃಷ್ಟಿ, ಪ್ರೆಸ್ ಬಯೋಪಿಯಾ
ಕಾರಣ ಕೊಡಿ ಪ್ರಶ್ನೆಗಳು.
ಆಕಾಶ ಏಕೆ ನೀಲಿ ಬಣ್ಣ ಕಾಣುತ್ತದೆ? , ನಕ್ಷತ್ರಗಳು ಏಕೆ ಮಿನುಗುತ್ತವೆ?
, ಟೆಂಡಾಲ್ ಪರಿಣಾಮ, ಶೀಘ್ರ ಸೂರ್ಯೋದಯ ಮತ್ತು ವಿಳಂಬಿತ
ಸೂರ್ಯಸ್ತ, ಟ್ರಾಫಿಕ್ ಸಂಕೇತಗಳು ಏಕೆ ಕೆಂಪು ಬಣ್ಣದ ದೀಪ ಹೊಂದಿವೆ?,
ಕಾಮನಬಿಲ್ಲಿನಲ್ಲಿ ಅತಿ ಕಡಿಮೆ ಚದುರುವ ಮತ್ತು ಹೆಚ್ಚು ಚದುರುವ ಬಣ್ಣಗಳು ಯಾವುವು?,
ಕಣ್ಣಿನ ಹೊಂದಾಣಿಕೆ ಸಾಮರ್ಥ್ಯ.
·
ಬೆಳಕಿನ ಚದುರುವಿಕೆ,ಕಣ್ಣಿನ ವಿವಿಧ ಭಾಗಗಳ ಕಾರ್ಯಗಳನ್ನು ಅಭ್ಯಾಸ ಮಾಡಿ ಉದಾಹರಣೆಗೆ ಸೀಳಿಯರಿ ಸ್ನಾಯುಗಳು ಮತ್ತು
ಪಾಪೆ ಕಾರ್ಯ.
·
ಈ ಅಧ್ಯಾಯದ ಬಹುತೇಕ ಪ್ರಶ್ನೆಗಳು ಅಭ್ಯಾಸದಲ್ಲಿ ಕೇಳಿರುವ ಪ್ರಶ್ನೆಗಳೇ
ಬರುತ್ತವೆ.
5. ಶಕ್ತಿಯ ಆಕರಗಳು
* ಜೈವಿಕ ಅನಿಲ ಸ್ತಾವರದ ಚಿತ್ರ, ಅದರ ವಿವಿಧ
ಭಾಗಗಳ ಕಾರ್ಯಗಳನ್ನು ಅಧ್ಯಯನ ಮಾಡಿ ಸುಲಭವಾಗಿ ಮೂರು ಅಂಕಗಳು ಪಡೆಯಬಹುದು.
* ಪವನ ಶಕ್ತಿ * ಜೈವಿಕ ಶಕ್ತಿ * ಸಮುದ್ರಶಕ್ತಿ * ಅಲೆಗಳ ಶಕ್ತಿ * ಸಾಗರ ಉಷ್ಣ ಶಕ್ತಿ * ಭೂಗರ್ಭ ಉಷ್ಣ ಶಕ್ತಿ * ನ್ಯೂಕ್ಲಿಯ ಶಕ್ತಿ ಇವುಗಳ ಚಿಕ್ಕ ವಿವರಣೆ
ಟಿಪ್ಪಣಿ ಮಾಡಿಕೊಂಡು ಓದಿ.
* ಇವುಗಳಿಂದ ಪರಿಸರದ ಮೇಲೆ ಆಗುವ ಪರಿಣಾಮಗಳನ್ನು ಅಭ್ಯಾಸ ಮಾಡಿ.
ರಸಾಯನಶಾಸ್ತ್ರ 25
1. ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
* ರಾಸಾಯನಿಕ ಕ್ರಿಯೆಗಳನ್ನು ಬರೆದು ಅಭ್ಯಾಸ ಮಾಡಿ. (ಸಂಯೋಗ ಕ್ರಿಯೆ ವಿಭಜನೆ ಕ್ರಿಯೆ ಸ್ಥಾನ ಪಲ್ಲಟ ಕ್ರಿಯೆ ದ್ವಿಸ್ಥಾನಪಲ್ಲಟ ಕ್ರಿಯೆ)
> ಉತ್ಕರ್ಷಣೆ ಮತ್ತು ಅಪಕರ್ಷಣೆ , ನಶಿಸುವಿಕೆ
ಮತ್ತು ಕಮಟುವಿಕೆ (ಮಾದರಿ ಪ್ರಶ್ನೆ ಪತ್ರಿಕೆ ಪ್ರಶ್ನೆಗಳನ್ನು ನೋಡಿ).
> ಅಂತರುಷ್ಣಕ ಮತ್ತು ಬಹಿರುಷ್ಣಕ ಕ್ರಿಯೆಗಳ ಬಗ್ಗೆ ಅನ್ವಯ ಪ್ರಶ್ನೆಗಳು
ಬರಬಹುದು.
2. ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
* ಕೆಳಗಿನ ರಾಸಾಯನಿಕಗಳ ತಯಾರಿಕೆ ಮತ್ತು ಉಪಯೋಗಗಳು
* ಚೆಲುವೆ ಪುಡಿ * ವಾಷಿಂಗ್ ಸೋಡಾ * ಅಡುಗೆ ಸೋಡಾ * ಪ್ಲಾಸ್ಟರ್ ಆಫ್ ಪ್ಯಾರಿಸ್
* ದೈನಂದಿನ ಜೀವನದಲ್ಲಿ pH ನ ಮಹತ್ವ.
* ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳ ಗುಣಗಳು ಮತ್ತು ಅವುಗಳ ರಾಸಾಯನಿಕ
ಕ್ರಿಯೆಗಳ ಪ್ರಶ್ನೆಗಳು ಬರುತ್ತವೆ. (ಕಾರಣ ಕೊಡಿ ಪ್ರಶ್ನೆಗಳು ಈ ಅಧ್ಯಾಯದಿಂದ
ಬರಬಹುದು)
3. ಲೋಹಗಳು ಮತ್ತು ಆಲೋಹಗಳು
* ಲೋಹಗಳು ಮತ್ತು ಆಲೋಹಗಳ ಭೌತಿಕ ಮತ್ತು ರಾಸಾಯನಿಕ ಗುಣಗಳು.
(ಸಂಭವನೀಯತೆ ಹೆಚ್ಚು)
* ಈ ಅಧ್ಯಾಯದಲ್ಲಿ ಕಾರಣ ಕೊಡಿ ಎನ್ನುವ ಪ್ರಶ್ನೆಗಳು ಬರಬಹುದು.
(ಅನ್ವಯ)
* ಅದುರುಗಳ ಪುಷ್ಟೀಕರಣ, * ಕಾಸುವಿಕೆ, * ಉರಿಯುವಿಕೆ ಇವುಗಳ ಅಭ್ಯಾಸ ಮಾಡಿ
* ಕಾಸುವಿಕೆ ಮತ್ತು ಹುರಿವಿಕೆ ಇವುಗಳ ವ್ಯತ್ಯಾಸ
> ನಶಿಸುವಿಕೆ ತಡೆಗಟ್ಟುವ ಕ್ರಮಗಳು
4. ಕಾರ್ಬನ್ ಮತ್ತು ಅದರ ಸಂಯುಕ್ತಗಳು
* ಇವುಗಳ ಮೇಲಿನ ಪ್ರಶ್ನೆಗಳು,
* ಕೆಟನೀಕರಣ, * ರಚನಾ ಸಮಾಂಗಿ, * ಅನುರೂಪ ಶ್ರೇಣಿಗಳು , * ಕ್ರಿಯಾ ಗುಂಪುಗಳು, * ಎಲೆಕ್ಟ್ರಾನ್ ಚುಕ್ಕೆ ಸೂತ್ರ,
* ಅಯಾನಿಕ್ ಬಂಧ, * ಸಹವೇಲೆನ್ಸೀಯ ಬಂಧ.
* ಪರ್ಯಾಪ್ತ ಹೈಡ್ರೋಕಾರ್ಬನ್ ಸಂಯುಕ್ತಗಳ ಅಣುಸೂತ್ರಗಳ ಅಭ್ಯಾಸ ಮಾಡಿ.
* ಸಾಬೂನು ಮತ್ತು ಮಾರ್ಜಕಗಳ ವ್ಯತ್ಯಾಸಗಳು.
* ಕಾರ್ಬನ್ ಸಂಯುಕ್ತಗಳ ರಾಸಾಯನಿಕ ಗುಣಗಳು,
* ಎಥನೋಲ್ ಮತ್ತು ಎಥನೋಯಿಕ್ ಆಮ್ಲ ಇವುಗಳ ಗುಣಗಳು.
5. ಧಾತುಗಳ ಆವರ್ತನಿಯ ವರ್ಗೀಕರಣ
* ನ್ಯೂ ಲ್ಯಾಂಡ್ ನ ಅಷ್ಟಕ ನಿಯಮ, * ಡೋಬಾರೈನರ್ ನ ತ್ರಿವಳಿ ನಿಯಮ,
* ಮಂಡಲೀವ್ ಆವರ್ತಕ ನಿಯಮ,
* ಆಧುನಿಕ ಆವರ್ತಕ ನಿಯಮ.
* ಕಾರಣ ಕೊಡಿ ಪ್ರಶ್ನೆಗಳು ಈ ಅಧ್ಯಾಯದ ಮೇಲೆ ಬರುತ್ತವೆ.
* K L M N ಎಲೆಕ್ಟ್ರಾನ್ ಗಳ ಕವಚಗಳು, ಇದರ ಮೇಲೆ
ಪ್ರಶ್ನೆಗಳು ಬರುತ್ತವೆ.
* 18 ನೇ ಗುಂಪಿನ ಜಡ ಅನಿಲಗಳು
ಕುರಿತ ಪ್ರಶ್ನೆಗಳು ಬರುತ್ತವೆ
(ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ಮತ್ತು ರಾಜ್ಯಮಟ್ಟದ
ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಗಳನ್ನು ಅಭ್ಯಾಸ ಮಾಡಿ)
NOTE: ಚಟುವಟಿಕೆ ಆಧರಿಸಿ ಅಭ್ಯಾಸದ ಪ್ರಶ್ನೆಗಳು ಇದ್ದಲ್ಲಿ
ಆ ಚಟುವಟಿಕೆಯ ಪ್ರಶ್ನೆಗಳು ಬರುತ್ತವೆ ಸರಳ ರಾಸಾಯನಿಕ ಸಮೀಕರಣಗಳನ್ನು ಕೇಳುತ್ತಾರೆ.
ರೇಡಿಯೋ ಕಾರ್ಯಕ್ರಮದ ವಿಡಿಯೋ ಲಿಂಕ್: https://youtu.be/uJsNrJVstKg?list=PLXFZ2a8hMet4jEog5-Hn9O2hKu2ebX9Z0
SPKANDAGAL
0 Reviews:
Post a Comment