ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ 2023
ರೇಡಿಯೋ ಕಾರ್ಯಕ್ರಮದ ಆಧಾರವಾಗಿ ಸಿದ್ಧಪಡಿಸಲಾದ ಸಾರಾಂಶ
==========================================
ಜೀವಶಾಸ್ತ್ರ 27 ( UNITS 06)
ವಿಜ್ಞಾನ ಪ್ರಶ್ನೆ ಪತ್ರಿಕೆ ಮೂರು ಭಾಗಗಳನ್ನು ಹೊಂದಿದೆ
1. ಭೌತಶಾಸ್ತ್ರ28 2. ರಸಾಯನಶಾಸ್ತ್ರ 25 3. ಮತ್ತು ಜೀವಶಾಸ್ತ್ರ27
ಚಿತ್ರಗಳು
ಜೀವಶಾಸ್ತ್ರದಲ್ಲಿ
9 ಚಿತ್ರಗಳನ್ನು ಅಭ್ಯಾಸ ಮಾಡಿ.
- ತೆರೆದ ಮತ್ತು ಮುಚ್ಚಿದ ಪತ್ರರಂದ್ರ
- ಮಾನವನ ಜೀರ್ಣಾಂಗ ವ್ಯೂಹ
- ಮಾನವನ ಹೃದಯದ ನೀಳಛೇದ ನೋಟ
- ವಿಸರ್ಜನಾಂಗವ್ಯೂಹ
- ನೆಫ್ರಾನ್
- ನರ ಕೋಶ
- ಮೆದುಳು
- ಹೂವಿನ ಚಿತ್ರ
- ಶಲಾಕಾಗ್ರದ ಮೇಲೆ ಪರಾಗ ರೇಣು ಮೊಳೆಯುವಿಕೆ ಚಿತ್ರ
ಜೀವ ಕ್ರಿಯೆಗಳು
·
ಈ ಅಧ್ಯಾಯವು 5 ಚಿತ್ರಗಳನ್ನು ಒಳಗೊಂಡಿದೆ
·
ಇದರಲ್ಲಿ ಚಿತ್ರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳು ಬರಬಹುದು.
ದ್ಯುತಿಸಂಶ್ಲೇಷಣೆ
ಎಂದರೇನು? ದ್ಯುತಿಸಂಶ್ಲೇಷಣೆಯ ಮೂರು ಘಟನೆಗಳು. ರಾಸಾಯನಿಕ
ಸಮೀಕರಣ,
ಆಹಾರ ಜೀರ್ಣ ಕ್ರಿಯೆಯಲ್ಲಿ
ಸಣ್ಣ ಕರುಳಿನ ಪಾತ್ರ, ಆಹಾರ ಪಚನವಾಗಲು ಸಹಕರಿಸುವ ಕಿಣ್ವಗಳು
ಗ್ರಂಥಿಗಳು
ಮತ್ತು ಅವುಗಳು ಸ್ರವಿಸುವ ಹಾರ್ಮೋನುಗಳು
ಮತ್ತು ಅವುಗಳ ಕಾರ್ಯ.
ಗ್ಲುಕೋಸ್
ನಿಂದ ಶಕ್ತಿ ಬಿಡುಗಡೆಯ ಮೂರು ರೀತಿಯ ಉಸಿರಾಟದ
ವಿಧಗಳ ವಿವರಣೆ,
ವಾಯುವಿಕ
ಮತ್ತು ಅವಾಯುವಿಕ
ಉಸಿರಾಟದ ವ್ಯತ್ಯಾಸಗಳು.
ಮಾನವನ ಹೃದಯದ ರಚನೆ ಮತ್ತು ಕಾರ್ಯ ವಿವರಣೆ,
ಇಮ್ಮಡಿ ಪರಿಚಲನೆ ಎನ್ನಲು ಕಾರಣ.
ನೆಫ್ರಾನ್
ನ ರಚನೆ ಮತ್ತು ಕಾರ್ಯ, ಸಸ್ಯಗಳಲ್ಲಿ ತ್ಯಾಜ್ಯ
ವಿಸರ್ಜನೆ ಹೇಗೆ ನಡೆಯುತ್ತದೆ,
ಪಕ್ಷಿ ಮತ್ತು ಸ್ತನಿಗಳಲ್ಲಿ ಆಮ್ಲಜನಕ ಸಹಿತ ಮತ್ತು ಆಮ್ಲಜನಕ
ರಹಿತ ರಕ್ತಗಳು
ಏಕೆ ಬೇರೆಬೇರೆ
ಇರಬೇಕು?
ಹೃತ್ಪಕ್ಷಿಗಳು
ಹೆಚ್ಚು ದಪ್ಪವಾದ
ಸ್ನಾಯು ಬಿತ್ತಿಯನ್ನು
ಹೊಂದಿರುತ್ತವೆ ಏಕೆ?
ನಿಯಂತ್ರಣ ಮತ್ತು ಸಹಭಾಗಿತ್ವ
ಈ ಅಧ್ಯಾಯದಲ್ಲಿ ಎರಡು ಚಿತ್ರಗಳನ್ನು ಅಭ್ಯಾಸ ಮಾಡಿ
5-6
ಅಂಕಗಳು ಬರುತ್ತವೆ
ನರ ಕೋಶದ ರಚನೆ ಮತ್ತು ಕಾರ್ಯಗಳು .
ಪರಾವರ್ತಿತ
ಪ್ರತಿಕ್ರಿಯೆ ಹೇಗೆ ನಡೆಯುತ್ತದೆ ? ಪರಾವರ್ತಿತ
ಚಾಪ ಎಂದರೇನು
ಮತ್ತು ಅದರ ಘಟಕಗಳು ಯಾವುವು ?
ಮೆದುಳಿನ
ಭಾಗಗಳು ಮತ್ತು ಅವುಗಳ ಕಾರ್ಯ.
ದ್ಯುತಿ ಅನುವರ್ತನೆ, ಜಲಾನುವರ್ತನೆ, ಗುರುತ್ವ ಅನುವರ್ತನೆ
ಮತ್ತು ರಾಸಾಯನಿಕ
ಅನುವರ್ತನೆ.
ಕೋಷ್ಟಕ7.1 ಅಭ್ಯಾಸ ಮಾಡಿ ಒಂದು ಅಂಕದ ಬಹು ಆಯ್ಕೆ ಪ್ರಶ್ನೆಗಳು ಇದರ ಮೇಲೆ ಬರಬಹುದು.
ಅಡ್ರಿನಾಲಿನ್ ಹಾರ್ಮೋನ್
ತುರ್ತು ಪರಿಸ್ಥಿತಿಯ
ಹಾರ್ಮೋನ್ ಎಂದು ಏಕೆ ಕರೆಯುತ್ತಾರೆ?
ಅಯೋಡಿನ್
ಇರುವ ಉಪ್ಪನ್ನು
ಏಕೆ ಬಳಸಬೇಕು?
ನಮ್ಮ ಪರಿಸರ
ತುಂಬಾ ಸರಳವಾದ ಅಧ್ಯಾಯ ಇದರ ಮೇಲೆ 2 ಅಂಕಗಳು ಬರಬಹುದು.
ಆಹಾರ ಸರಪಳಿ, ಆಹಾರ ಜಾಲ, ಆಹಾರ ಸರಪಳಿಗೆ ಸಂಬಂಧಿಸಿದ
ಪ್ರಶ್ನೆಗಳು,
ಆಹಾರ ಸರಪಳಿಯಲ್ಲಿ ಶಕ್ತಿ ಸಂಚಾರದ ಪಿರಮಿಡ್
ವಿವರಣೆ.
ಯಾವ ಪೋಷಣ ಸ್ತರದ ಜೀವಿಗಳು ಹೆಚ್ಚು ರಾಸಾಯನಿಕಗಳನ್ನು ಸಂಗ್ರಹಿಸುತ್ತದೆ ಮತ್ತು ಏಕೆ?
ಓಝೋನ್ ಪದರು ಮತ್ತು ಅದರ ಕಾರ್ಯ , ಓಝೋನ್ ಪದರು ನಾಶಕ್ಕೆ ಕಾರಣವೇನು? ಓಝೋನ್ ನಾಶದಿಂದ
ಪರಿಸರಕ್ಕೆ ಆಗುವ ಅಪಾಯ ಏನು?
ಜೈವಿಕ ವಿಘಟನೆಗೆ ಒಳಗಾಗುವ
ಮತ್ತು ಜೈವಿಕ ವಿಘಟನೆಗೆ ಒಳಗಾಗದ ತ್ಯಾಜ್ಯಗಳ ವ್ಯತ್ಯಾಸ.,
ಪರಿಸರ ವ್ಯವಸ್ಥೆಯಲ್ಲಿ ವಿಘಟಕಗಳ ಪಾತ್ರವೇನು ?
CFC ಮುಕ್ತ ರೆಫ್ರಿಜರೇಟರ್ ಇತ್ತೀಚೆಗೆ ತಯಾರಿಸುತ್ತಿದ್ದಾರೆ ಏಕೆ?
ಪರಿಸರ
ವ್ಯವಸ್ಥೆಯಲ್ಲಿ ಶಕ್ತಿ ಸಂಚಾರ ಏಕಮುಖವಾಗಿರುತ್ತದೆ ಏಕೆ?
ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ?
ಈ ಅಧ್ಯಾಯದ ಮೇಲೆ 5-6 ಅಂಕಗಳು ಬರುತ್ತವೆ
ಅಲೈಂಗಿಕ
ಸಂತಾನೋತ್ಪತ್ತಿಯ ವಿಧಾನಗಳು,
ಸಸ್ಯಗಳಲ್ಲಿ
ಬೀಜ ಮತ್ತು ಹಣ್ಣು ಹೇಗೆ ಉಂಟಾಗುತ್ತವೆ ವಿವರಣೆ, ಮೊಳೆಯುವಿಕೆ,
ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿವ್ಯೂಹಗಳ ಭಾಗಗಳು ಮತ್ತು ಅವುಗಳ ಕಾರ್ಯಗಳು.,
ಒಂದು ವೇಳೆ ಅಂಡವು ಫಲಿತಗೊಳ್ಳದಿದ್ದರೆ ಏನಾಗುತ್ತದೆ?
ಜರಾಯು ಎಂದರೇನು ಮತ್ತು ಅದರ ಕಾರ್ಯವೇನು?
ಗರ್ಭನಿರೋಧಕ
ವಿಧಾನಗಳು. ಲೈಂಗಿಕವಾಗಿ
ಹರಡುವ ರೋಗಗಳು ಅವುಗಳ ವಿವರಣೆ.,
ಸಂತಾನೋತ್ಪತ್ತಿ
ಸಮಯದಲ್ಲಿ ಡಿಎನ್ಎ ಸ್ಥಿರತೆ
ಹೇಗೆ ಉಂಟಾಗುತ್ತದೆ?
ಅನುವಂಶಿಯತೆ ಮತ್ತು ಜೀವ ವಿಕಾಸ
5-6 ಅಂಕಗಳು ಬರುತ್ತವೆ.
ಚಕ್ಕರ್ ಬೋರ್ಡ್ ಅಭ್ಯಾಸ ಮಾಡಿ. (ಎತ್ತರ ಸಸ್ಯ - ಕುಬ್ಜ ಸಸ್ಯ ಹಾಗೂ ದುಂಡಾದ ಹಳದಿ ಬೀಜಗಳು - ಸುಕ್ಕಾದ
ಹಸಿರು ಬೀಜಗಳು )
ಮಾನವರಲ್ಲಿ
ಮಗುವಿನ ಲಿಂಗ ನಿರ್ಧಾರ ಹೇಗೆ ಆಗುತ್ತದೆ?
ಜೀವ ವಿಕಾಸ ಎಂದರೇನು? ಜೀವ ವಿಕಾಸದ ಹಂತಗಳು,
ಗಳಿಸಿದ ಗುಣಗಳು ಮುಂದಿನ ಪೀಳಿಗೆಗೆ ವರ್ಗಾವಣೆ
ಆಗುವುದಿಲ್ಲ ಏಕೆ?
ಕಾಡು ಹೊಕೋಸಿನಿಂದ ಬೇರೆ ಬೇರೆ ಹೂಕೋಸುಗಳು
ಅಭಿವೃದ್ಧಿ ಆದವು. ಇದು ಕೃತಕ ಆಯ್ಕೆ ಹೊರತು ನೈಸರ್ಗಿಕ ಆಯ್ಕೆ ಅಲ್ಲ ಏಕೆ?
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
3
ಅಂಕಗಳು ಬರುತ್ತವೆ
5R ಗಳ ವ್ಯಾಖ್ಯೆ, ವಿವರಣೆ ಮತ್ತು ಅವುಗಳ ವ್ಯತ್ಯಾಸ,
ಕಾಡಿನ ಪಾಲುದಾರರು ಯಾರು ಮತ್ತು ಅವರು ಹೇಗೆ ಕಾಡನ್ನು
ಅವಲಂಬಿಸಿದ್ದಾರೆ?
ಬೃಹತ್ ಆಣೆಕಟ್ಟುಗಳ ನಿರ್ಮಾಣದಿಂದ
ಉಂಟಾಗುವ ಸಮಸ್ಯೆಗಳು .
ನೀರಿನ ಕೊಯ್ಲು ಮತ್ತು ಜಲಾನಯನ ಪ್ರದೇಶದ
ನಿರ್ವಹಣೆ, ಮಳೆ ನೀರಿನ ಕೊಯ್ಲು ಅದರ ಮಹತ್ವ,
ಅರಣ್ಯಗಳ
ನಿರ್ವಹಣೆ, ಏಕೆ ನೈಸರ್ಗಿಕ
ಸಂಪನ್ಮೂಲಗಳ ನಿರ್ವಹಣೆ ಅಗತ್ಯ?
ಮರುಬಳಕೆ
ಮರುಚಕ್ರೀಕರಣಕ್ಕಿಂತ ಉತ್ತಮ ಏಕೆ ?
ನೈಸರ್ಗಿಕ
ಸಂಪನ್ಮೂಲಗಳ ನಿರ್ವಹಣೆಗಾಗಿ ನಮ್ಮ ಅವಶ್ಯಕತೆಗಳನ್ನು ಏಕೆ ಕಡಿತಗೊಳಿಸಬೇಕು?
(
NOTE: ಉಳಿದಂತೆ ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಿ )
ರೇಡಿಯೋ
ಕಾರ್ಯಕ್ರಮದ ವಿಡಿಯೋ ಲಿಂಕ್.. https://www.youtube.com/watch?v=hPvM-fbLVjc&list=PLXFZ2a8hMet4jEog5-Hn9O2hKu2ebX9Z0&index=4
SPKANDAGAL
0 Reviews:
Post a Comment